ಚಡಚಣ: ಅಪಾರ ಪ್ರಮಾಣದ ಭಾರೀ ಮಳೆ ಹಿನ್ನೆಲೆ, ಪಟ್ಟಣದ ಗೊಬ್ಬರದ ಅಂಗಡಿಗೆ ನುಗ್ಗಿದ ಮಳೆ ನೀರು, ಲಕ್ಷಾಂತರ ಮೌಲ್ಯದ ಗೊಬ್ಬರ ಹಾನಿ
ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯ ಪರಿಣಾಮ ಅದರಲ್ಲೂ ಚಡಚಣ ಪಟ್ಟಣದಲ್ಲಿ ಅಪಾರ ಯೂರಿಯಾ ಗೊಬ್ಬರ ನೀರು ಪಾಲಾಗಿದೆ. ಕೊರಮಂಡಲ ಕಂಪನಿಯ ಔಟ್ ಲೇಟ್ ಗೋಡವನ್ ಗೆ ನೀರು ನುಗ್ಗಿದ್ದು ಬರೊಬ್ಬರಿ 7 ಲಕ್ಷ ಮೌಲ್ಯದ ರಾಸಾಯನಿಕ ಗೊಬ್ಬರ ನೀರಲ್ಲಿ ಹೋಮವಾಗಿದೆ. 2 ಸಾವಿರಕ್ಕು ಅಧಿಕ ಗೊಬ್ಬರ ಪ್ಯಾಕೇಟ್ಗಳನ್ನ ಇಡಲಾಗಿತ್ತು, ಇದರಲ್ಲಿ 600 ಪ್ಯಾಕೇಟ್ ಸಂಪೂರ್ಣವಾಗಿ ನೀರಲ್ಲಿ ಹಾಳಾಗಿವೆ...