ಬಂಗಾರಪೇಟೆ: ನ್ಯಾಯಾಧೀಶರ ಮೇಲೆ,ಶೂ ಎಸೆದಿರುವುದನ್ನು ಖಂಡಿಸಿ
ಸೂಕ್ತ ಕ್ರಮವಹಿಸುವಂತೆ ಆಗ್ರಹಿಸಿ ನಗರದಲ್ಲಿ ದಲಿತ ಸಮಾಜ ಸೇನೆ ವತಿಯಿಂದ ಪ್ರತಿಭಟನೆ
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ನ್ಯಾಯಾಲಯದ ಆವರಣದಲ್ಲೆ ವಕೀಲರೊಬ್ಬರು ಶೂ ಎಸೆದಿರುವುದನ್ನು ಖಂಡಿಸಿ ಇತಿಹಾಸದಲ್ಲೆ ಇದೇ ಮೊದಲಾಗಿದ್ದು ಆರೋಪಿ ವಕೀಲನ ವಿರುದ್ದ ಸೂಕ್ತಕ್ರಮವಹಿಸುವಂತೆ ಮಂಗಳವಾರ ಆಗ್ರಹಿಸಿ ದಲಿತ ಸಮಾಜ ಸೇನೆ ವತಿಯಿಂದ ಪ್ರತಿಭಟನೆ ಮಾಡಿದರು. ಪಟ್ಟಣದ ಕುವೆಂಪು ವೃತ್ತದಲ್ಲಿ ಪ್ರತಿಭಟಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ನ್ಯಾಯಾಧೀಶರ ಮೇಲೆ ಅದೂ ನ್ಯಾಯಾಲಯದ ಆವರಣದಲ್ಲೆ ಬೂಟ್ ಎಸೆದಿರುವುದು ನ್ಯಾಯಾಂಗಕ್ಕೆ ದೊಡ್ಡ ಕಳಂಕವಾಗಿದೆ,ನ್ಯಾಯಧೀಶರ ಮೇಲೆ ಬೂಟ್ ಎಸೆಯುವುದು ಸಂವಿಧಾನಕ್ಕೆ ಮಾಡಿ ಅಪಮಾನವಾಗಿದೆ ಎಂದು ಘmನೆಯನ್ನು ತೀವ್ರವಾಗಿ ಖಂಡಿಸಿದರು.