ಕೊಳ್ಳೇಗಾಲ. ಪಟ್ಟಣದಲ್ಲಿ ಬುಧವಾರ 5 ನೇ ವರ್ಷದ ಹನುಮ ಜಯಂತಿ ಉತ್ಸವವನ್ನು ವಿವಿಧ ಕಲಾತಂಡದೊಂದಿಗೆದ ವಿಜೃಂಭಣೆಯಿಂದ ನಡೆಸಿದರು. ಪಟ್ಟಣದ ಕಾವೇರಿ ರಸ್ತೆಯ ರಾಮಮಂದಿರ ಮುಂಭಾಗದಲ್ಲಿ ಬಳಿ ಹನುಮ ಹಾಗೂ ಶ್ರೀರಾಮ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಮಾಜಿ ಸಚಿವ ಎನ್.ಮಹೇಶ್ ಚಾಲನೆ ನೀಡಿದರು. ಮೆರವಣಿಗೆ ಪಟ್ಟಣದ ಕಾವೇರಿ ರಸ್ತೆಯಿಂದ ಹೊರಟು ಕನ್ನಿಕಾಪರಮೇಶ್ವರಿ ರಸ್ತೆ, ಮಸೀದಿ ವೃತ್ತ, ಡಾ.ರಾಜ್ ಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ದೇವಲ ಮಹರ್ಷಿ ವೃತ್ತಗಳಲ್ಲಿ ಮೆರವಣಿಗೆ ಸಾಗಿತು