ದಾಂಡೇಲಿ: ನಗರದಲ್ಲಿ ಹೂವು, ಹಣ್ಣು - ಹಂಪಲು, ತರಕಾರಿ ಮಾರಾಟಕ್ಕೆ ಮುಕ್ತ ಅವಕಾಶ ನೀಡುವಂತೆ ಬಜರಂಗ ದಳದಿಂದ ನಗರ ಸಭೆಗೆ ಮನವಿ
ದಾಂಡೇಲಿ : ನಗರದಲ್ಲಿ ಹೂವು, ಹಣ್ಣು - ಹಂಪಲು, ತರಕಾರಿ ಮಾರಾಟಕ್ಕೆ ಮುಕ್ತ ಅವಕಾಶ ನೀಡುವಂತೆ ಬಜರಂಗ ದಳದಿಂದ ಇಂದು ಬುಧವಾರ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ನಗರ ಸಭೆಗೆ ಮನವಿಯನ್ನು ನೀಡಲಾಯ್ತು. ಮನವಿ ನೀಡುವುದಕ್ಕೂ ಮುನ್ನ ಬಜರಂಗ ದಳದ ಜಿಲ್ಲಾ ಸುರಕ್ಷಾ ಪ್ರಮುಖರಾದ ಚಂದ್ರು ಮಾಳಿ, ಬಿಜೆಪಿ ಘಟಕದ ಅಧ್ಯಕ್ಷ ಬುದವಂತಗೌಡ ಪಾಟೀಲ್ ಅವರು ಮಾತನಾಡಿದರು.