ಚಿತ್ರದುರ್ಗ: ಅಂಜನಾಪುರ ಗ್ರಾಮದಲ್ಲಿ ಅಡಿಕೆ ಮರ ಕಡಿದ ಕಿಡಿಗೇಡಿಗಳು
ಅಂಜನಾಪುರ ಗ್ರಾಮದಲ್ಲಿ ಕಿಡಿಗೇಡಿಗಳು ಅಡಿಕೆ ಮರಗಳನ್ನ ಕಡಿದ ಘಟನೆ ನಡೆದಿದೆ. ಬುದವಾರ ಮಧ್ಯಾಹ್ನ 1 ಗಂಟೆಗೆ ಘಟನೆ ಬೆಳಕಿಗೆ ಬಂದಿದ್ದು ಗ್ರಾಮದ ಕಾಲವರ ಓಂಕಾರಪ್ಪ ಎಂಬುವವರ ತೋಟದಲ್ಲಿದ್ದ ಸುಮಾರು 200 ಕ್ಕೂ ಹೆಚ್ಚು ಅಡಿಕೆ ಮರಗಳನ್ನ ಕಡಿದು ಹಾಕಿದ್ದು ಇದರಿಂದಾಗಿ ರೈತ ಕಾಲವರ ಓಂಕಾರಪ್ಪ ಎಂಬುವವರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಇನ್ನೂ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅಂಜನಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು ತಡರಾತ್ರಿ ತೋಟಕ್ಕೆ ನುಗ್ಗಿದ ಯಾರೋ ದುಷ್ಕರ್ಮಿಗಳು ಅಡಿಕೆ ಮರಗಳನ್ನ ಕಡಿದು ಹಾಕಿದ್ದಾರೆ.