ಮೊಳಕಾಲ್ಮುರು: ತಾಲೂಕಿನ ಬೆಟ್ಟಗುಡ್ಡಗಳಲ್ಲಿ ಸಿಗುವ ಪ್ರಾಕೃತಿದತ್ತ ಸೀತಾಫಲಕ್ಕೆ ಎಲ್ಲಿಲ್ಲದ ಬೇಡಿಕೆ, ಮಾರಾಟ ಮಾಡುವ ಮಹಿಳೆಯರಿಗೆ ಸುಗ್ಗಿ ಕಾಲ
*ಬೆಟ್ಟಗುಡ್ಡಗಳಲ್ಲಿ ಸಿಗುವ ಪ್ರಾಕೃತಿದತ್ತ ಸೀತಾಫಲಕ್ಕೆ ಎಲ್ಲಿಲ್ಲದ ಬೇಡಿಕೆ* ಚಿತ್ರದುರ್ಗ:-ಮೊಳಕಾಲ್ಮುರು ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶ, ಬೆಟ್ಟ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಸೀತಾಫಲಕ್ಕೆ ಮನಸೋಲದವರೇ ಇಲ್ಲಾ. ಸೀತೆಯ ಹೆಸರಿನೊಂದಿಗೆ ನಂಟು ಹೊಂದಿರುವ ತಿನ್ನಲು ತುಸು ಕಸರತ್ತು ಮಾಡಬೇಕೆನ್ನುವುದನ್ನು ಬಿಟ್ಟರೇ, ಸೀತಾಫಲ ಸಿಹಿಯ ಜೊತೆ ಸ್ವಾದಿಷ್ಟ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಸರ್ವ ರೋಗಗಳಿಗೆ ರಾಮಬಾಣದಂತಿರುವ ಸೀತಾಫಲ ಹಣ್ಣು ಕೇವಲ ಎರಡು ತಿಂಗಳ ಮಾತ್ರ ಸಿಗುತ್ತದೆ.