ಬಾಶೆಟ್ಟಿಹಳ್ಳಿ ಪಪಂ ಮತದಾನ ಹಬ್ಬಕ್ಕೆ ಸಜ್ಜು. ಪ.ಪಂಗೆ ೧೯, ನಗರಸಭೆ ಉಪ ಚುನಾವಣೆಗೆ ೨ ಮತಗಟ್ಟೆ ಸ್ಥಾಪನೆ. ಡಿ.೨೪ಕ್ಕೆ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಮತಎಣಿಕೆ.ದೊಡ್ಡಬಳ್ಳಾಪುರ. ಬಾಶೆಟ್ಟಿಹಳ್ಳಿ ಪಪಂ ಚುನಾವಣೆ ಹಾಗೂ ದೊಡ್ಡಬಳ್ಳಾಪುರ ನಗರಸಭೆಯ ವ್ಯಾಪ್ತಿಯ ಹೇಮಾವತಿ ಪೇಟೆಯಲ್ಲಿನ ಉಪಚುನಾವಣೆ ಮತದಾನವೂ ಭಾನುವಾರ ನಡೆಯಲಿದ್ದು, ಮತದಾರರು ಉತ್ಸುಕರಾಗಿದ್ದಾರೆ. ರಾಜ್ಯ ಚುನಾವಣಾ ಆಯೋಗವು ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ಹಾಗೂ ದೊಡ್ಡಬಳ್ಳಾಪುರ ನಗರಸಭೆಗೆ ಉಪ ಚುನಾವಣೆ ನಡೆಸಲು