ತೀರ್ಥಹಳ್ಳಿ: ಭಗವತಿ ಬಳಿ ಸೆರೆಯಾದ ಆನೆ ಕುರಿತು ಮಲ್ಲಂದೂರು ಗ್ರಾಮಸ್ಥರ ಪ್ರತಿಕ್ರಿಯೆ
ಶೃಂಗೇರಿ ಯ ಭಗವತಿ ಬಳಿ ಸರಿಯಾದ ಆನೆ ಕುರಿತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಲ್ಲಂದೂರು ಗ್ರಾಮಸ್ಥರು ಪ್ರತಿಕ್ರಿಯೆ ನೀಡಿದ್ದಾರೆ.ಈ ಕುರಿತು ಸೋಮವಾರ ಮಲ್ಲಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಂದೂರಿನ ಗ್ರಾಮಸ್ಥ ಅವಿನ್ ಅವರು ಭಗವತಿ ನೇಚರ್ ಕ್ಯಾಂಪ್ ಬಳಿ ಆನೆ ಸೆರೆ ಹಿಡಿದಿದ್ದಾರೆ.ಆ ಆನೆ ಸುಮಾರು 20 ವರ್ಷಗಳಿಂದ ಸುಳ್ಯ ಸುಬ್ರಹ್ಮಣ್ಯ ಕುದುರೆಮುಖದಿಂದ ಆಗುಂಬೆ ಮಾರ್ಗವಾಗಿ ಹೊಸನಗರದ ವರಾಹಿ ಹಿನ್ನೀರಿನವರಿಗೆ ಸಂಚರಿಸುತ್ತಿತ್ತು. 12 ವರ್ಷದ ಹಿಂದೆ ಧರ್ಮಪ್ಪ ಎಂಬುವವರನ್ನ ಕೊಂದಿತ್ತು. ಅದಾದ ಬಳಿಕ ತುಂಬಾ ಸೌಮ್ಯ ಸ್ವಭಾವದಲ್ಲಿತ್ತು. ಯಾರ ಮೇಲೂ ದಾಳಿ ಮಾಡಿರಲಿಲ್ಲ.ಕೆರೆಕಟ್ಟೆ ಬಳಿ ಈ ಆನೆ ದಾಳಿ ನಮಗೆಲ್ಲ ಆಶ್ಚರ್ಯ ಮೂಡಿಸಿದೆ ಎಂದರು.