ಕೊಳ್ಳೇಗಾಲ: ಹೊಸಹಂಪಾಪುರದ ಬಳಿ ಬೈಕ್‌ನಿಂದ ಬಿದ್ದು ಮಹಿಳೆ ದುರಂತ ಮರಣ
ಕೊಳ್ಳೇಗಾಲ. ತಾಲ್ಲೂಕಿನ ಹೊಸ ಹಂಪಾಪುರ ಗ್ರಾಮದ ರಸ್ತೆಯಲ್ಲಿ ಬೈಕ್ ಹಿಂಬದಿಯಲ್ಲಿದ್ದ ಮಹಿಳೆ ಆಯಾತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಜರುಗಿದೆ. ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಸುಧಾ(36) ಎಂಬಾಕೆ ಮೃತ್ತ ದುರ್ದೈವಿ. ಈಕೆ ನೆನ್ನೆ ಮ.ಬೆಟ್ಟಕ್ಕೆ ತೆರಳಿ ಪೂಜೆ ಮುಗಿಸಿ ವಾಪಸ್ಸು ಊರಿಗೆ ಹೋಗುವ ಮುನ್ನ ತನ್ನ ತಾಯಿ ಮನೆ ಟಿ.ಎನ್.ಪುರ ತೊತಡಿ ಮೋಳೆಗೆ ಪ್ರಸಾದ ನೀಡಲು ತನ್ನ ಸಂಬಂಧಿಕರ ಬೈಕ್ ನಲ್ಲಿ ತೆರಳುವಾಗ ಸುಧಾಳಿಗೆ ಪಿಡ್ಸ್ ಬಂದಿದ್ದು ಆಯಾ ತಪ್ಪಿ ಬಿದ್ದು ಗಾಯಗೊಂಡಿದ್ದಾಳೆ. ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾಳೆ