ಹೊಸನಗರ: ಅರಸಾಳು ಗ್ರಾಮದಲ್ಲಿ ಕೇಬಲ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ
ಹೊಸನಗರ ತಾಲೂಕಿನ ಅರಸಾಳು ಗ್ರಾಮದಲ್ಲಿ ನಡೆದ ಕೇಬಲ್ ಕಳುವು ಪ್ರಕರಣಕ್ಕೆ ಸಂಬಂಧಿತಂತೆ ಇಬ್ಬರು ಆರೋಪಿಗಳನ್ನು ರಿಪ್ಪನ್ ಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಅರಸಾಳು ಗ್ರಾಮದ ಮಂಜು ಹಾಗೂ ನಾಗ ಬಂಧಿತ ಆರೋಪಿಗಳಾಗಿದ್ದು,ಅರಸಾಳು ಗ್ರಾಮದ ಹೊಳೆಬದಿಯಲ್ಲಿ ಮೋಟರ್ ಗಳಿಗೆ ಅಳವಡಿಸುತ್ತಿದ್ದ ಕೇಬಲ್ ಗಳನ್ನು ಕದ್ದು ಮಾರುತ್ತಿದ್ದ ಆರೋಪಿಗಳು ಅರಸಾಳು ಗ್ರಾಮದಲ್ಲಿ ಸುತ್ತಾಡುತ್ತಿರುವ ಕುರಿತು ಬಂದಂತಹ ಖಚಿತ ಮಾಹಿತಿ ಇಬ್ಬರನ್ನ ಮಾಲು ಸಮೇತ ರಿಪ್ಪನ್ ಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಕುರಿತಾದ ಮಾಹಿತಿ ಮಂಗಳವಾರ ಲಭ್ಯವಾಗಿದೆ.