ಮಂಡ್ಯ: ನಗರದ ಮೈಷುಗರ್'ನಲ್ಲಿ 6 ದಿನಗಳಿಂದ ಕಬ್ಬು ಅರೆತ ಸ್ಥಗಿತ, ಕಾರ್ಖಾನೆ ಮುಖ್ಯ ದ್ವಾರದ ಬಳಿ ರೈತರ ಆಕ್ರೋಶ
Mandya, Mandya | Oct 10, 2025 ಕಳೆದ 6 ದಿನಗಳಿಂದ ಸರ್ಕಾರಿ ಸ್ವಾಮ್ಯದ ಮೈ ಷುಗರ್ ಕಾರ್ಖಾನೆ ಕಬ್ಬು ನುರಿಸದ ಹಿನ್ನಲೆ ಮುಖ್ಯ ದ್ವಾರದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಶುಕ್ರವಾರ ಕಚೇರಿ ಮುಖ್ಯ ದ್ವಾರದ ಬಳಿ ಬಂದು ಸರ್ಕಾರ, ಕಾರ್ಖಾನೆ ಎಂಡಿ, ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು. ಕಬ್ಬು ತುಂಬಿಕೊಂಡು ಬಂದಿರುವ ಎತ್ತುಗಳ ಮೇವಿಗೂ ಸಮಸ್ಯೆಯಾಗಿದೆ. ಕಬ್ಬು ನುರಿಸುವ ಕುರಿತು ಸರಿಯಾದ ಮಾಹಿತಿ ನೀಡದೆ ಕಟಾವು ಮಾಡಿರುವ ಕಬ್ಬು ಒಣಗುತ್ತಿದೆ. ಆಡಳಿತ ಮಂಡಳಿ, ಅಧಿಕಾರಿಗಳು ಹಾರಿಕೆ ಉತ್ತರ ನುಣುಚಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆಯನ್ನು ದುಸ್ಥಿತಿಗೆ ತಳ್ಳಿ ಮಾರಾಟ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.