ಕಾಗವಾಡ: ನಾನು ಯಾವುದೇ ಕಾರಣಕ್ಕೂ ಸವದಿ ದೋಸ್ತಿ ಬಿಡಲ್ಲ ಉಗಾರ್ ಖುರ್ದ್ ಗ್ರಾಮದಲ್ಲಿ ಶಾಸಕ ರಾಜು ಕಾಗೆ
ನಾನು ಯಾವುದೇ ಕಾರಣಕ್ಕೂ ಸವದಿ ದೋಸ್ತಿ ಬಿಡಲ್ಲ ಎಂದು ಶಾಸಕ ರಾಜು ಕಾಗೆ ಹೇಳಿದರು. ನಿನ್ನೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಿಂದ ಶ್ರೀನಿವಾಸ್ ಪಾಟೀಲ ನಾಮಪತ್ರ ಹಿಂಪಡೆದಿದ್ದಾರೆ. ಆದ್ದರಿಂದ ಲಕ್ಷ್ಮಣ ಸವದಿ ಚುನಾವಣೆ ಮಾಡುವ ಅನಿವಾರ್ಯತೆ ಎದುರಾಗಿದೆ. ಮಂಗಳವಾರ ಉಗಾರ ಖುರ್ದ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ನನ ಅವಿರೋಧ ಆಯ್ಕೆ ನನಗೆ ಸ್ವಲ್ಪ ನೋವು ತಂದಿದೆ. ನಾನು ಲಕ್ಷ್ಮಣ ಸವದಿ ಇಬ್ಬರು ನಾಮಪತ್ರ ಸಲ್ಲಿಸಿದ್ದೀವಿ ನಾನೊಬ್ಬನೇ ಅವಿರೋಧ ಆಯ್ಕೆಯಾಗಿದ್ದು ನನಗೆ ನೋವು ತಂದಿದೆ. ಸವದಿ ಗೆಲ್ಲೋದು ಖಚಿತ ಎಂದು ಹೇಳಿದರು