ಮಂಡ್ಯ: ಅನ್ನಪೂರ್ಣೇಶ್ವರಿ ನಗರದಲ್ಲಿ ಟೆಲಿಗ್ರಾಮ್ ಆಪ್ ಅಲ್ಲಿ ಬಂದ ಹಣ ದ್ವಿಗುಣದ ಮಾಹಿತಿ ನಂಬಿ ₹ 3.29 ಲಕ್ಷ ಹಣ ಕಳೆದುಕೊಂಡ ಮಹಿಳೆ
Mandya, Mandya | Oct 12, 2025 ಟೆಲಿಗ್ರಾಮ್ ಆಪ್ ಅಲ್ಲಿ ಬಂದ ಹಣ ದ್ವಿಗುಣದ ಮಾಹಿತಿ ನಂಬಿ ಮಹಿಳೆಯೊಬ್ಬರು ₹ 3.29 ಲಕ್ಷ ಹಣ ಕಳೆದುಕೊಂಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ಜರುಗಿದ್ದು ತಡವಾಗಿ ವರದಿಯಾಗಿದೆ. ಆಶಾರಾಣಿ ಕೆ ಹಣ ಕಳೆದುಕೊಂಡವರು. ಕಳೆದ ಅ.8ರಿಂದ 11ರವರೆಗೆ ಹಣ ದ್ವಿಗುಣದ ಅಮಿಷ ತೋರಿ ಹಂತ ಹಂತವಾಗಿ ₹ 3,29675 ರೂ. ಗಳನ್ನು ಆನ್ಲೈನ್ ಮೂಲಕ ಪಡೆದು ಅಪರಿಚಿತರು ಪಡೆದು ವಂಚಿಸಿದ್ದಾರೆ. ವಂಚನೆ ಕುರಿತು ನಗರದ ಸಿ ಇ ಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.