ದಾವಣಗೆರೆ: ನಗರದ ಭಾರತ ಕಾಲೋನಿಯ 5ನೇ ಕ್ರಾಸ್‌ನಲ್ಲಿ ಸ್ಕೂಟಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಗರದ ಭಾರತ ಕಾಲೋನಿಯ 5ನೇ ಕ್ರಾಸ್‌ನಲ್ಲಿ ಭಾನುವಾರ ಬೆಳಗ್ಗಿನ ಜಾವ ನಡೆದಿದೆ. ಭಾರತ ಕಾಲೋನಿಯ ನಿವಾಸಿ ಶಾಂತ ಬಸವರಾಜ ಎಂಬುವರಿಗೆ ಈ ಸ್ಕೂಟಿ ಸೇರಿದೆ. ಮನೆಯ ಸದಸ್ಯರು ಬೆಳಗ್ಗೆ ಎದ್ದು ನೋಡಿ ದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.