ಶೋರಾಪುರ: ನಗರದ ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಯಲ್ಲಿ ತಾಲೂಕ ಪದಾಧಿಕಾರಿಗಳ ಮಾಸಿಕ ಸಭೆ, ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಸುರಪುರ ನಗರದ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷರಾದ ಟಿ ಎನ್ ಭೀಮು ನಾಯಕ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ತಾಲೂಕಿನಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಹಾಗೂ ಮುಂದಿನ ಹೋರಾಟ ಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು. ಸಂಘಟನೆಯಲ್ಲಿ ಸರಿಯಾಗಿ ಯಾವ ಪದಾಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುವದಿಲ್ಲವೋ ಅಂತಹವರನ್ನು ತೆಗೆದು ಉತ್ಸಾಹಿ ಯುವಕರನ್ನು ನೇಮಿಸುವ ಕುರಿತು ಹಾಗೂ ನಿಷ್ಕ್ರಿಯವಾಗಿರುವ ಘಟಕಗಳನ್ನು ವಿಸರ್ಜನೆ ಮಾಡಿ ನೂತನ ಸಕ್ರಿಯ ಘಟಕಗಳನ್ನು ಮರುಸ್ಥಾಪಿಸಬೇಕೆಂದು ಹೇಳಿದರು. ಇತ್ತೀಚಿನ ದಿನಮಾನಗಳಲ್ಲಿ ರಾಜ್ಯಾಧ್ಯಕ್ಷರ ಗಟ್ಟಿತನದ ಎದೆಗಾರಿಕೆಯ ಹೋರಾಟದಿಂದ ನಾಡಿನ ಜ್ವಲಂತ ಸಮಸ್ಯೆಗಳ ಪರಿಹರಿಸುವ ಮೂಲಕ ನ್ಯಾಯ ಒದಗಿಸಿಕೊಡುತ್ತಿದ