ದಾಂಡೇಲಿ : ಧಾರವಾಡದ ಹೈಕೋರ್ಟಿನ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ನ್ಯಾಯವಾದಿಗಳು ಹಾಗೂ ಕಾರ್ಮಿಕ ಸೇನೆಯ ಅಧ್ಯಕ್ಷರಾದ ಬಿ.ಡಿ.ಹಿರೇಮಠ ಅವರಿಗೆ ದಾಂಡೇಲಿಯ ಮೃತ್ಯುಂಜಯ ಮಠದಲ್ಲಿ ವೀರಶೈವ ಸೇವಾ ಸಂಘದ ವತಿಯಿಂದ ಭಾನುವಾರ ರಾತ್ರಿ 8:30 ಗಂಟೆ ಸುಮಾರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಾಂಡೇಲಿಯ ವೀರಶೈವ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಂದ್ರು ಮಾಳಿ, ಅಖಿಲ ಭಾರತ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಸಿದ್ದಪ್ಪಾ ಕುರುಗುಂದ, ಪ್ರಮುಖರಾದ ಸಂಜಯ ಕಲ್ಯಾಣಿ, ಎಸ್.ಎಮ್.ಪಾಟೀಲ, ನಂದೀಶ ಮುಂಗರವಾಡಿ, ಹನುಮಂತ ಕಾರ್ಗಿ, ಕಲ್ಲಪ್ಪಾ, ಮಂಜು, ರಮೇಶ್ ಉಪ್ಪಾರ, ಶಂಕ್ರಯ್ಯಾ ಹಿರೇಮಠ, ಪಾರ್ವತಿ ಕುರಗುಂದ ಮೊದಲಾದವರು ಉಪಸ್ಥಿತರಿದ್ದರು.