ಶಿವಮೊಗ್ಗ: ನಗರದಲ್ಲಿ ಅದ್ದೂರಿಯಾಗಿ ನಡೆದ ಈದ್ ಮಿಲಾದ್ ಮೆರವಣಿಗೆ
ಶಿವಮೊಗ್ಗ ನಗರದಲ್ಲಿ ಸೋಮವಾರ ಈದ್ ಮಿಲಾದ್ ಮೆರವಣಿಗೆ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಇನ್ನು ಶಿವಮೊಗ್ಗ ನಗರದ ಜಾಮೀಯಾ ಮಸೀದಿಯಿಂದ ಪ್ರಾರಂಭವದಂತಹ ಮೆರವಣಿಗೆ ಅಮೀರ್ ಅಹ್ಮದ್ ಸರ್ಕಲ್ ಗೆ ಬಂದು ತಲುಪಿದೆ. ಮುಸ್ಲಿಂ ಗುರುಗಳ ನೇತೃತ್ವದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿದ್ದು,ಈದ್ ಮಿಲಾದ್ ಮೆರವಣಿಗೆಯಲ್ಲಿ ಅತಿ ಹೆಚ್ಚು ಡಿಜೆಗಳನ್ನು ಬಳಸಲಾಗಿದೆ.ಅಲ್ಲದೆ ಕೆಲವರು ಕಪ್ಪು ಪಟ್ಟಿಯನ್ನಾ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇನ್ನ ಕೆಲವು ಫ್ಲೇಕ್ ಕಾರ್ಡ್ ಹಾಗೂ ಕೆಲವರ ಫೋಟೋಗಳನ್ನ ಸಹ ಪ್ರದರ್ಶಿಸಲಾಯಿತು. ಔರಂಗಜೇಬನ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕೆಲವರು ಪ್ರದರ್ಶಿಸಿದ್ದಾರೆ.