ಬೆಳಗಾವಿ ಚಳಿಗಾಲದ ಅಧಿವೇಶನ ಇದೇ ಡಿ.8 ರಿಂದ ನಡೆಯಲಿರುವ ಹಿನ್ನಲೆ ಎಅಜದಯ ಸರ್ಕಾರದ ವಿರುದ್ದ ಡಿ. 9ರಂದು ವಿರೋಧ ಪಕ್ಷವಾದ ರಾಜ್ಯ ಬಿಜೆಪಿ ನಡೆಸಲಿರುವ ಪ್ರತಿಭಟನೆಯ ಸ್ಥಳವನ್ನು ಇಂದು ರವಿವಾರ 4 ಗಂಟೆಗೆ ಡಿಸಿಪಿ ನಾರಾಯಣ ಭರಮನಿ ಸೇರಿ ಬಿಜೆಪಿ ಮುಖಂಡರು ಪರಿಶೀಲನೆ ನಡೆಸಿದರು. ಬೆಳಗಾವಿ ತಾಲೂಕಿನ ಕೊಂಡುಸಕೊಪ್ಪ ಗ್ರಾಮದ ಬಳಿ ಇರುವ ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆಯಿದ್ದು ನಗರ ಪೊಲೀಸ್ ಇಲಾಖೆಯಿಂದ ಬಿಜೆಪಿಗೆ ಅನುಮತಿ ನೀಡಲಾಗಿರುವ ಸ್ಥಳವನ್ನು ಡಿಸಿಪಿ ನಾರಾಯಣ ಭರಮನಿ ಸ್ವತಃ ಪರಿಶೀಲನೆ ನಡೆಸಿದರು.