ಕಲಬುರಗಿ: ಕುರುಬ ಸಮಾಜದಿಂದ ನಾವು ಸಾಕಷ್ಟು ಕಲಿತ್ತಿದ್ದೇವೆ: ನಗರದ ಕುರುಬ ಸಮಾವೇಶದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅಬ್ಬರದ ಭಾಷಣ
ಕಲಬುರಗಿ : ಕುರುಬ ಸಮಾಜದಿಂದ ನಾವು ಬಹಳಷ್ಟು ಕಲಿತ್ತಿದ್ದೆವೆ.. ಕುರುಬ ಸಮುದಾಯ ಒಂದು ಜಾತಿಯಲ್ಲ.. ಅದು ಒಂದು ನೀತಿ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.. ಸೆ17 ರಂದು ಮಧ್ಯಾನ 3 ಗಂಟೆಗೆ ಕಲಬುರಗಿಯಲ್ಲಿ ನಡೆದ ಕುರುಬ ಸಮಾವೇಶದಲ್ಲಿ ಮಾತನಾಡಿದ ಅವರು, ಶೌರ್ಯದಲ್ಲಿ ಸಂಗೊಳ್ಳಿ ರಾಯಣ್ಣ, ಆಧ್ಯಾತ್ಮಕದಲ್ಲಿ ಕನಕದಾಸರು, ಸಾಮ್ರಾಜ್ಯ ಸ್ಥಾಪನೆಯಲ್ಲಿ ಹಕ್ಕಬುಕ್ಕರು ಹಾಗೇ ಆಡಳಿತ ಹೇಗೆ ನಡೆಸಬೇಕು ಎನ್ನುವುದರಲ್ಲಿ ಸಿಎಂ ಸಿದ್ದರಾಮಯ್ಯ ಸಿಗ್ತಾರೆ ಅಂತಾ ಸಮಾವೇಶದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕುರುಬ ಸಮಾಜವನ್ನ ಹಾಡಿ ಹೊಗಳಿದ್ದಾರೆ.