ಕೊಪ್ಪ: ಪಟ್ಟಣಕ್ಕೆ ಎಂಟ್ರಿ ಕೊಟ್ಟ ಕಾಡಾನೆಗಳು.! ದಾಮೋದರ ಪೆಟ್ರೋಲ್ ಬಂಕ್ ಹುಡುಗರ ಮೊಬೈಲ್ನಲ್ಲಿ ಮದಗಜಗಳ ವಿಡೊಯೋ ಸೆರೆ.!
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಕೊಪ್ಪ ಪಟ್ಟಣಕ್ಕೆ ಎರಡು ಕಾಡಾನೆಗಳು ಎಂಟ್ರಿ ಕೊಟ್ಟಿದ್ದು, ದಾಮೋದರ ಪೆಟ್ರೋಲ್ ಬಂಕ್ ಹುಡುಗರು ತಮ್ಮ ಮೊಬೈಲ್ ನಲ್ಲಿ ಕಾಡಾನೆಗಳ ವಿಡಿಯೋ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅರಣ್ಯ ಇಲಾಖೆಯ ವಿರುದ್ಧದ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.