మంత్రాలయం: ರಾಯಚೂರು : ಭಕ್ತರ ಅನುಕೂಲಕ್ಕೆ ನೂತನ ಡಾರ್ಮೆಂಟರಿ ಕಟ್ಟಡ ಭೂಮಿ ಪೂಜೆ
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬರುವಂತಹ ಭಕ್ತರ ಅನುಕೂಲಕ್ಕಾಗಿ ನೂತನ ಡಾರ್ಮೆಂಟರಿ ಕಟ್ಟಡಕ್ಕೆ ಅಡಿಗಲ್ಲು ಪೂಜೆಯನ್ನು ಡಿಕೆ ಶಿವಕುಮಾರ್ ದಂಪತಿಗಳು ನೆರವೇರಿಸಿದರು. ಮಂತ್ರಾಲಯ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ಮತ್ತು ಡಿ.ಕೆ. ಶಿವಕುಮಾರ್ ಸಂಯುಕ್ತವಾಗಿ ಮಂತ್ರಾಲಯದಲ್ಲಿ ಹೊಸದಾಗಿ ಪ್ರಸ್ತಾಪಿಸಲಾದ ಯಾತ್ರಿಕ ಸೌಲಭ್ಯ ಕೇಂದ್ರದ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಆಂಧ್ರ ರಾಜ್ಯದ ಕ್ರೀಡಾ ಸಚಿವ ಮತ್ತು ಸಚಿವ ಎನ್ ಎಸ್ ಬೋಸ್ ರಾಜ್ ಅವರು ಉಪಸ್ಥಿತರಿದ್ದರು.