ಮಳವಳ್ಳಿ: ಹೆಜ್ಜೇನು ದಾಳಿಗೆ ಸಿಕ್ಕು ಇಬ್ಬರು ಮಕ್ಕಳು ಸೇರಿ ದಂತೆ ಮೂವರು ಅಸ್ವಸ್ಥ, ತಾಲ್ಲೂಕಿನ ಕಲ್ಲಾರೆಪುರ ಗ್ರಾಮದಲ್ಲಿ ನಡೆದ ಘಟನೆ
ಮಳವಳ್ಳಿ : ಹೆಜ್ಜೇನು ದಾಳಿಯಿಂ ದಾಗಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಕಲ್ಲಾರೆಪುರ ಗ್ರಾಮದಲ್ಲಿ ಜರುಗಿದೆ. ಈ ಗ್ರಾಮದ ಬಸಪ್ಪ ಮಕ್ಕಳಾದ ಗಣೇಶ ಹಾಗೂ ವಿಷ್ಣುಪ್ರಸಾದ್ ಅಸ್ವಸ್ಥಗೊಂಡವರಾಗಿದ್ದು ಬುಧವಾರ ಸಾಯಂಕಾಲ 6.30 ರ ಸಮಯದಲ್ಲಿ ಈ ಘಟನೆ ಜರುಗಿದೆ. ಜಮೀನು ಕೆಲಸ ಮುಗಿಸಿ ವಾಪಸ್ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಮೂವರ ಮೇಲೆ ಹೆಜ್ಜೇನುಗಳ ಹಿಂಡು ಹಠಾತ್ ದಾಳಿ ನಡೆಸಿವೆ ಎಂದು ವರದಿಯಾಗಿದೆ. ತೀವ್ರವಾಗಿ ಗಾಯಗೊಂಡು ಅಸ್ವಸ್ಥ ಗೊಂಡಿರುವ ಮೂವರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಐಸಿಯು ವಾಡ್೯ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.