ಕಲಬುರಗಿ : ಕಲಬುರಗಿ ನಗರ ಹೊರವಲಯದ ಉದನೂರು ಗ್ರಾಮದಿಂದ ನಂದಿಕೂರು ಗ್ರಾಮದ ರಸ್ತೆಯಲ್ಲಿರೋ ಮರೆಗೆಮ್ಮ ದೇವಸ್ಥಾನದ ಬಳಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ದಾಳಿ ಸಂದರ್ಭದಲ್ಲಿ ಜೂಜಾಡುತ್ತಿದ್ದ ಏಳು ಜನರನ್ನ ಬಂಧಿಸಿರೋ ಘಟನೆ ನಡೆದಿದೆ.. ನವೆಂಬರ್ 5 ರಂದು ಸಂಜೆ 6 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಖಚಿತ ಮಾಹಿತಿ ಮೇರೆಗೆ ಸಬ್ ಅರ್ಬನ್ ಠಾಣೆ ಪೊಲೀಸರು, ಶಿವಶರಣಪ್ಪ, ಶಿವರಾಜ್, ಮಹಾಂತಪ್ಪ, ಲಕ್ಷ್ಮಿಕಾಂತ್, ಮಲ್ಲಿಕಾರ್ಜುನ, ಶರಣಪ್ಪ ಸಹಿತ 7 ಜನರನ್ನ ಬಂಧಿಸಿದ್ದಾರೆ. ಇನ್ನೂ ಬಂಧಿತರಿಂದ ₹17030 ರೂ ನಗದು ಹಣ ಜಪ್ತಿ ಮಾಡಿಕೊಂಡಿದ್ದು, ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.