ಹುಮ್ನಾಬಾದ್: ರಿಕವ್ರಿ ಕುರಿತು ನಾಳೆ ನಿಮ್ಮ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯ ಪ್ರಮುಖರ ವಿಶೇಷ ಸಭೆ ನಡೆಸಿ ಬೆಲೆ ನಿಗದಿ ನಿರ್ಧಾರ : ನಗರದಲ್ಲಿ ಜಿಲ್ಲಾಧಿಕಾರಿ
Homnabad, Bidar | Nov 12, 2025 ಕಬ್ಬಿನ ರಿಕವ್ರಿ ಸಮಸ್ಯೆಯಿಂದಾಗಿ ಈ ಭಾಗದ ರೈತರಿಗೆ ಕಬ್ಬಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಬೆಳಗಾವಿಯಲ್ಲಿ 11ಕ್ಕೂ ಅಧಿಕ ಪ್ರಮಾಣದ ರಿಕವರಿ ಬರುತ್ತೆ ಆದರೆ ಬೀದರ್ನಲ್ಲಿ ನೈನ್ ಪಾಯಿಂಟ್ ಫೈವ್ ಬರುತ್ತೆ ಇದರಲ್ಲಿ ಇರೋ ತಾಂತ್ರಿಕ ಸಮಸ್ಯೆ ಕುರಿತು ನಾಳೆ ಗುರುವಾರ ನ. 13ರಂದು ಬೀದರ್ನಲ್ಲಿ ವಿಶೇಷ ಸಭೆಯನ್ನು ನಡೆಸಿ, ಬೆಲೆ ನಿಗದಿ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು. ನಗರದಲ್ಲಿ ಬುಧವಾರ ಕಬ್ಬು ಬೆಳೆಗಾರರು ಹಮ್ಮಿಕೊಂಡ ಪ್ರತಿಭಟನೆ ಹಿನ್ನೆಲೆಯಲ್ಲಿ ಮಧ್ಯಾಹ್ನ 3ಕ್ಕೆ ಭೇಟಿನೀಡಿ, ಅವರು ಮಾತನಾಡಿದರು.