ಕೊಪ್ಪ: 15 ದಿನದೊಳಗೆ ಆಸ್ಪತ್ರೆ ಉದ್ಘಾಟನೆ ಮಾಡ್ಲೇಬೇಕು.! ಜಯಪುರದಲ್ಲಿ ಆಸ್ಪತ್ರೆಗಾಗಿ ಪ್ರತಿಭಟನೆ.!
15 ದಿನದ ಒಳಗೆ ಸಾರ್ವಜನಿಕ ಆಸ್ಪತ್ರೆಯ ಹೊಸ ಕಟ್ಟಡವನ್ನು ಉದ್ಘಾಟನೆ ಮಾಡಿ ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ. ಕಳೆದ ತಿಂಗಳುಗಳ ಹಿಂದೆಯೇ ಜೈಪುರ ಸಾರ್ವಜನಿಕ ಆಸ್ಪತ್ರೆಯ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿತ್ತು ಆದರೆ ಕಾರಣಾಂತರಗಳಿಂದ ದಿನಾಂಕವನ್ನು ಮುಂದುವರಿದು ಸಾರ್ವಜನಿಕರು ತುರ್ತು ಚಿಕಿತ್ಸೆಗಾಗಿ ಪರಿತಪಿಸುವಂತಾಗಿರುವುದರಿಂದ ಕೂಡಲೇ ಹೊಸ ಕಟ್ಟಡದ ಉದ್ಘಾಟನೆ ಮಾಡಿ ಸಾರ್ವಜನಿಕರ ಸೇವೆಗೆ ಅನುಕೂಲ ಒದಗಿಸಿ ಕೊಡಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.