ಬಳ್ಳಾರಿ: ಬಲಿಷ್ಠ, ಸಶಕ್ತ ಭಾರತ ನಿರ್ಮಾಣದಲ್ಲಿ ಮೋದಿಯವರ ಪಾತ್ರ ಪ್ರಮುಖ: ನಗರದಲ್ಲಿ ಮಾಜಿ ಸಚಿವ ಶ್ರೀರಾಮುಲು
ದೇಶದ ಪ್ರಧಾನಿ ನರೇಂದ್ರ ಮೋದಿಯವರ 11ವರ್ಷಗಳ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದು, ಮೋದಿ ನಾಯಕತ್ವದಲ್ಲಿ ಸರ್ಕಾರ ಮಾಡಿದ ಕೆಲಸಗಳನ್ನು 'ಸುವರ್ಣಾಕ್ಷರಗಳಲ್ಲಿ ಬರೆಯಬೇಕು, ಯಾಕೆಂದರೆ ಬಲಿಷ್ಠ ರಾಷ್ಟ್ರದ ನಿರ್ಮಾಣ, ಸಶಕ್ತ ಭಾರತ ನಿರ್ಮಾಣದಲ್ಲಿ ಮೋದಿಯವರ ಪಾತ್ರ ಪ್ರಮುಖವಾಗಿದೆ ಎಂದು ಬಿಜೆಪಿಯ ಹಿರಿಯ ಧುರೀಣ, ಮಾಜಿ ಸಚಿವ ಶ್ರೀರಾಮುಲು ಹೇಳಿದರು. ಬಳ್ಳಾರಿ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಪ್ರಧಾನಿ ಮೋದಿ ಅವರು ದೇಶದ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಿದರು. ಜವಾಬ್ದಾ-ರಿಯುತ ಸರ್ಕಾರವನ್ನು ಒದಗಿಸುವ ಮೂಲಕ ಉತ್ತಮ ಆಡಳಿತದ ರಾಜಕೀಯವನ್ನು ಪ್ರಾರಂಭಿಸಿದರು ಎಂದ್ರು...