ಚಾಮರಾಜನಗರ: ಉಗೇನದಹುಂಡಿಯಲ್ಲಿ ಹುಲಿ ಸೆರೆ ಕೂಂಬಿಂಗ್- ವಿಶೇಷ ವಾಕ್ ಥ್ರೂ ಬೋನ್ ಅಳವಡಿಕೆ
ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಹುಲಿ ಉಟಪಳ ಹೆಚ್ಚಾಗಿದ್ದು ಚಾಮರಾಜನಗರ ತಾಲೂಕಿನ ಮೂರು ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ಗುರುವಾರ ಹುಲಿ ಸೆರೆ ಕೂಂಬಿಂಗ್ ನಡೆಸುತ್ತಿದೆ. ಚಾಮರಾಜನಗರ ತಾಲೂಕಿನ ಹೆಗ್ಗೋಠಾರ, ಕಲ್ಪುರ ಹಾಗೂ ಉಗೇನದಹುಂಡಿ ಗ್ರಾಮಗಳ ಜಮೀನಿನಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಈ ಟೈಗರ್ ಆಪರೇಷನ್ ಗೆ " ವಾಕ್ ಥ್ರೂ ಕೇಜ್ " ಎಂಬ ವಿಶೇಷ ಬೋನ್ ಅಳವಡಿಸಲಾಗಿದೆ. ಹುಲಿ ಓಡಾಟದ ಹಾದಿಯಲ್ಲಿ ಈ ಬೋನನ್ನು ಅಳವಡಿಸಲಿದ್ದು ಹುಲಿ ಕಾಲಿಟ್ಟ ಕೂಡಲೇ ಎರಡು ಕಡೆಯಿಂದ ಬಾಗಿಲು ಬಂದ್ದಾಗಿ ಹುಲಿಯನ್ನು ಬಲೆಗೆ ಬೀಳಿಸುವ ತಾಂತ್ರಿಕತೆ ಇದರದ್ದಾಗಿದೆ.