ದಾಂಡೇಲಿ: ನಗರದಲ್ಲಿಚೊಚ್ಚಲ ಬಾರಿಗೆ ದೊಡ್ಡ ಪರದೆಯ ಹಾಗೂ ದೊಡ್ಡ ಬಜೆಟಿನ ರುದ್ರ ಅವತಾರ ಚಲನ ಚಿತ್ರ ನಿರ್ಮಾಣಕ್ಕೆ ಮುಂದಡಿಯಿಟ್ಟ ಉದ್ಯಮಿ ಪ್ರೇಮಾನಂದ ಗವಸ
ದಾಂಡೇಲಿ : ದಾಂಡೇಲಿಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ದೊಡ್ಡ ಪರದೆಯ ಹಾಗೂ ದೊಡ್ಡ ಬಜೆಟಿನ ರುದ್ರ ಅವತಾರ ಎಂಬ ಚಲನಚಿತ್ರ ನಿರ್ಮಾಣಕ್ಕೆ ದಾಂಡೇಲಿಯ ಉದ್ಯಮಿ ಹಾಗೂ ಸಮಾಜಸೇವಕರಾದ ಪ್ರೇಮಾನಂದ ಗವಸ್ ಅವರು ಮುಂದಡಿಯಿಟ್ಟಿದ್ದಾರೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಚಲನಚಿತ್ರ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ತರಬೇಕೆಂಬ ಸದುದ್ದೇಶದಡಿ ಮೊದಲ ಬಾರಿಗೆ ದೊಡ್ಡ ಬಜೆಟಿನ ಚಲನಚಿತ್ರ ನಿರ್ಮಾಣಕ್ಕೆ ಪ್ರೇಮಾನಂದ ಗವಸ್ ಅವರು ಮುಂದಾಗಿರುವುದಕ್ಕೆ ನಗರದಲ್ಲಿಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.