ಕಾರಟಗಿ: ಮುಷ್ಟೂರು ಗ್ರಾಮದಲ್ಲಿ ಲೋಕ ಕಲ್ಯಾಣಕ್ಕಾಗಿ ಮರವೇರಿ ಕುಳಿತ ಸ್ವಾಮಿಜಿ, 101 ದಿನ ಮರದ ಮೇಲೆ ದ್ಯಾನ...!
ಲೋಕ ಕಲ್ಯಾಣಕ್ಕಾಗಿ ಸ್ವಾಮಿಜಿಯೊಬ್ಬರು ಮರದ ಮೇಲೆ ದ್ಯಾನಕ್ಕೆ ಕುಳಿತ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಷ್ಟುರು ಗ್ರಾಮದ ಬರಗಾಲ ಸಿದ್ದಪ್ಪನ ಮಠದಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಾಪುರದ ಸಚ್ಚಿದಾನಂದ ಶ್ರೀ ಸ್ವಾಮಿಜಿ , ಮಠದ ಆವರಣದಲಿರೋ ಮಾವಿನ ಮರದ ಮೇಲೆ ಟೆಂಟ್ ಹಾಕಿಕೊಂಡು 5 ದಿನಗಳಿಂದ ದ್ಯಾನಕ್ಕೆ ಕುಳಿತಿದ್ದಾರೆ. 101 ದಿನಗಳ ವರೆಗೆ ಈ ದ್ಯಾನ ಮುಂದುವರೆಯಲಿದೆ. ದ್ಯಾನ ಮುಗಿಯೋ ವರೆಗೂ ಈ ಸ್ವಾಮಿಜಿ ಮೌನವಾಗಿರಲಿದ್ದಾರೆ...