ಬಳ್ಳಾರಿ: ನಗರದ ಪಿಂಜಾರ್ ಓಣಿಯಲ್ಲಿಬೆಡ್ ತಯಾರಿಕಾ ಮಳಿಗೆಯಲ್ಲಿ ಬೆಂಕಿ ಅವಘಡಓರ್ವ ಮಹಿಳೆಗೆ ಗಂಭೀರ ಗಾಯ:ಸ್ಥಳಕ್ಕೆ ಎಸ್ಪಿ ಶೋಭಾರಾಣಿ ಭೇಟಿ ಪರಿಶೀಲನೆ
ಮಕ್ಕಳಾಟ ದೊಡ್ಡವರಿಗೆ ಪ್ರಾಣ ಸಂಕಟ ಎನ್ನುವ ಮಾತಿನಂತೆ, ದಿಂಬು ಗಾದೆ ಮಾಡುವ ಅಂಗಡಿಯೊಂದರಲ್ಲಿ ಮಗುವೊಂದು ಅಕಸ್ಮಾತ್ ಬೆಂಕಿಪೊಟ್ಟಣದ ಕಡ್ಡಿ ಹಚ್ಚಿದ ಹಿನ್ನೆಲೆ ಬೆಂಕಿ ಹತ್ತಿಕೊಂಡಿರೋ ಘಟನೆ ಬಳ್ಳಾರಿ ನಗರದ ಪಿಂಜಾರ್ ಓಣಿಯಲ್ಲಿ ಶನಿವಾರ ಮಧ್ಯಾಹ್ನ 2:30ಕ್ಕೆ ನಡೆದಿದೆ. ಘಟನೆ ಯಲ್ಲಿ ಬೆಂಕಿ ಕಡ್ಡಿ ಹಚ್ಚಿದ ಮಗುವಿನ ತಾಯಿ ಶಾಯಿರ ಬಾನುಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಸೇರಿದಂತೆ ಆಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದ್ರೇ ಅಷ್ಟರಲ್ಲಾಗಲೇ ಶಾಹಿರಾ ಬಾನುಗೆ ಮೈಕೈ ಯಲ್ಲ ಸುಟ್ಟಿದೆ. ಸ್ಥಳದಲ್ಲಿಯೇ ಇದ್ದ ಇನ್ನಿಬ್ಬರು ಕಾರ್ಮಿಕರು ಮತ್ತು ಬೆಂಕಿ ಹಚ್ಚಿದ ಬಾಲಕಿಗೆ ಯಾವುದೇ ಗಾಯಗಳಾಗಿಲ್ಲ. ಕೂಡಲೇ ಶಾಹಿರಾ ಬಾನು ಅವರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಎಸ