ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಸಿಟಿ ಬಸ್ ನಿಯಂತ್ರಣ ತಪ್ಪಿ ಅಪಘಾತ ಭಾನುವಾರ ಸಂಭವಿಸಿತ್ತು.ಈ ಅಪಘಾತದಲ್ಲಿ ಗಂಭೀರವಾಗ ಗಾಯಗೊಂಡಿದ್ದ ಶಿವಮೊಗ್ಗ ಶಾಂತಿನಗರದ ಶನೇಶ್ಚರ ದೇವಸ್ಥಾನ ಸಮೀಪದ ನಿವಾಸಿ 31 ವರ್ಷದ ಅಹಮ್ಮದ್ ಎಂಬ ವ್ಯಕ್ತಿ ಮೃತಪಟ್ಡ ಹಿನ್ನೆಲೆ ಖಾಸಗಿ ಆಸ್ಪತ್ರೆಯ ಬಳಿ ಆತನ ಸಂಬಂಧಿಕರು ಹಾಗೂ ಸ್ನೇಹಿತರು ನೇರೆದು ಗೊಂದಲದ ವಾತಾವರಣ ನಿರ್ಮಾಣವಾಗಿದ್ದು,ಖಾಸಗಿ ಆಸ್ಪತ್ರೆ ಹಾಗೂ ಶಿವಮೊಗ್ಗದ ಸಿಟಿ ಬಸ್ ಚಾಲಕನ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ