ರಾಯಚೂರು ನಗರಕ್ಕೆ ಆಗಮಿಸಿದಿದ್ದರೇ ಏನು ಕಳೆದುಕೊಳ್ಳುತ್ತಿದ್ದೆ ಎಂದು ನನಗೆ ತಳಿಯಿತು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿದರು. ಸಭೆಯಲ್ಲಿ ಮಾತನಾಡಿದ ಷಡಕ್ಷರಿ ಅವರು ನಾನು ರಾಯಚೂರಿಗೆ ಹಲವು ಬಾರಿ ಬರಬೇಕು ಅಂತ ಇತ್ತು ಆದರೆ ಆಗಿರಲಿಲ್ಲ ಇಂದು ಬಂದೆ ನಾನು ಇಂದು ಬರಲಿಲ್ಲ ಅಂದಿದ್ದರೆ ನಾನು ಏನೋ ಮಿಸ್ ಮಾಡಿಕೊಳ್ಳುತ್ತಿದ್ದೆ ಅನ್ನೋದು ನನಗೆ ಈಗ ಗೊತ್ತಾಗಿದೆ. ಹಿಂದೆ ರಾಯಚೂರಿನಲ್ಲಿ ನಮ್ಮ ಸಂಘಟನೆ ಅಷ್ಟು ಶಕ್ತಿಶಾಲಿಯಾಗಿಲ್ಲ ಎಂಬ ಮಾತುಗಳು ಇತ್ತು ಆದರೆ ಕೃಷ್ಣ ಅವರು ಅಧ್ಯಕ್ಷರಾದ ಮೇಲೆ ಇಲ್ಲಿ ಸಾಕಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.