ದಾಂಡೇಲಿ : ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಡಿ ಹೊಸಪೇಟೆಯಲ್ಲಿ ನಡೆದ 14 ವರ್ಷ ವಯೋಮಿತಿಯೊಳಗಿನ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಮಿಂಚಿ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದ ಕೆನರಾ ವೆಲ್ಪೇರ್ ಟ್ರಸ್ಟಿನ ನಗರದ ಇ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಹರ್ಷಲ್ ಸಂಜೀವ್ ಮುನಿಸ್ವಾಮಿ ಈತನ ಸಾಧನೆಯನ್ನು ಗುರುತಿಸಿ ದಾಂಡೇಲಿಯ ಕಾಂಗ್ರೆಸ್ ಮುಖಂಡರುಗಳಾದ ದಾದಾಪೀರ್ ನದೀಮುಲ್ಲಾ, ಬಶೀರ್ ಗಿರಿಯಾಲ ಹಾಗೂ ಪ್ರಭುದಾಸ ಎನಿಬೇರಾ ಅವರು ಗುರುವಾರ ಸಂಜೆ 6:00 ಗಂಟೆ ಸುಮಾರಿಗೆ ಸನ್ಮಾನಿಸಿ ಗೌರವಿಸಿದರು.