ಕಾರವಾರ ತಾಲೂಕಿನ ವ್ಯಾಪ್ತಿಯಲ್ಲಿ 33 ಕೆ.ವಿ ಕೋಣೆ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆಯ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜ.21 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 33 ಕೆ.ವಿ ಉಪಕೇಂದ್ರದಿಂದ ಪೂರೈಸಲ್ಪಡುವ ಕಾರವಾರ ನಗರ ಕೋಡಿಬಾಗ, ಹಬ್ಬುವಾಡಾ, ಎನ್.ಎಚ್-17, ಬೈತಖೋಲ, ಬಿಣಗಾ, ತೋಡುರು, ಅಮದಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಗರದಲ್ಲಿ ಮಂಗಳವಾರ ಸಂಜೆ 7.30ಕ್ಕೆ ಹೆಸ್ಕಾಂ ಮಾಹಿತಿ ನೀಡಿದೆ