ಚಿತ್ತಾಪುರ ಭೀಮ ನಡಿಗೆ ಪಥಸಂಚಲನದಿಂದ RSS-BJP ನಾಯಕರು ಹತಾಶೆಗೊಂಡು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇವರಿಂದ ನಾವು ಪಾಠ ಕಲಿಯುವುದು ಅಗತ್ಯವಿಲ್ಲ ಎಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಬುಧವಾರ 7 ಗಂಟೆಗೆ ಹೇಳಿಕೆ ಬಿಡುಗಡೆ ಮಾಡಿದ ಅವರು, ಹತಾಶೆ ಭಾವನೆಯಿಂದ ಬಿಜೆಪಿ ಮುಖಂಡರು ಸತ್ಯಕ್ಕೆ ದೂರವಾದ ಆರೋಪಗಳನ್ನ ಮಾಡ್ತಿದ್ದಾರೆ. ಸಂವಿಧಾನದ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುವುದು ಸರಿಯಲ್ಲ, ಆರ್ ಎಸ್ ಎಸ್ ಕಾರ್ಯಕರ್ತರು ಕೈಯಲ್ಲಿ ಬಡಿಗೆ ಹಿಡಿದರೆ ನಾವು ಸಂವಿಧಾನ ಪೀಠಿಕೆ ಮತ್ತು ತ್ರಿವರ್ಣ ಧ್ವಜ ಹಿಡಿದು ಪಥಸಂಚಲನ ನಡೆಸುವ ಮೂಲಕ ಶಾಂತಿ ಸೌಹಾರ್ದತೆ ಸಾರಿದ್ದೇವೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ