ಕಂಪ್ಲಿ: ನಗರದಲ್ಲಿ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ಶಿಕ್ಷಣಕ್ಕೆ ಅಧಿಕಾರಿ ಸಾಥ್ : ಪೋಷಕರು ಆರೋಪ
Kampli, Ballari | Dec 14, 2025 ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ನವೋದಯ ಜವಾಹರ ವಿದ್ಯಾಲಯದ 6ನೇ ತರಗತಿ ಆಯ್ಕೆ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪೋಷಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದರು. 'ಪರೀಕ್ಷೆ ಕೇಂದ್ರದ ಕೆಲ ಕೊಠಡಿಯಲ್ಲಿ ಖಾಸಗಿ ಕೋಚಿಂಗ್ ಸೆಂಟರ್‌ಗೆ ಸೇರಿದ ವಿದ್ಯಾರ್ಥಿಗಳಿಗೆ ಅನ್ಯರು ಉತ್ತರ ಹೇಳಿ ಕೊಟ್ಟಿದ್ದಾರೆ ಎಂದು ನಮ್ಮ ಮಕ್ಕಳು ಪರೀಕ್ಷೆ ಬಳಿಕ ಗಮನಕ್ಕೆ ತಂದಿದ್ದಾರೆ. ಅದರಿಂದ ಬೇರೆ ವಿದ್ಯಾ-ರ್ಥಿಗಳಿಗೆ ಅನ್ಯಾಯವಾಗಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ವಿಚಾರಣೆ ನಡೆಸಿ ಮರು ಪರೀಕ್ಷೆ ನಡೆಸಲು ಕ್ರಮ ತೆಗೆದುಕೊಳ್ಳಬೇಕು' ಎಂದು ಪೋಷಕರು ಒತ್ತಾಯಿಸಿದರು.