ಮಡಿಕೇರಿ: ಸಿದ್ದಾಪುರದ ಬಾಣಂಗಾಲದಲ್ಲಿ ಅಕ್ರಮ ಗಾಂಜಾ ಮಾರಟ ಪಶ್ಚಿಮಬಂಗಾಳದ ಇರ್ವರ ಬಂಧನ
ಅಕ್ರಮ ಗಾಂಜಾ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ತಪಾನ್ ಸರ್ದಾರ್(38), ಅರ್ಚನಾ ಸರ್ದಾರ್(30) ಬಂಧಿತ ವ್ಯಕ್ತಿಗಳು. ಪಶ್ಚಿಮ ಬಂಗಾಳ ಮೂಲದವರಾದ ಇವರು ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಗಾಂಜಾ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು 1.166 ಕೆಜಿ ಗಾಂಜಾದೊಂದಿಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ