ಬಸವಕಲ್ಯಾಣ: ಹೈವೆ ರಸ್ತೆಯಲ್ಲಿ ವೇಗವಾಗಿ ಚಲಿಸುತಿದ್ದ ಡಿಸಿಎಂ ವಾಹನವೊಂದು ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಉಮ್ಮರ್ಗಾದ ಚೌರಸ್ತಾ ಬಳಿ ಜರುಗಿದೆ. ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದ ನಿವಾಸಿ ಸದಾಶಿವ ದಾದಾರಾವ ಮಂಗೆ ( 35) ಹಾಗೂ ಕೋಹಿನೂರ ವಾಡಿ ಗ್ರಾಮದ ನಿವಾಸಿ ಸರಸ್ವತಿ ಶಂಕರ್ ಅಡೆಪ್ಪಗೊಳ (80) ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಈ ಕುರಿತು ಉಮ್ಮರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.