ಆಳಂದ: ಪಟ್ಟಣದ ಕೋರ್ಟ್‌ನಲ್ಲಿ ನಡೆದ ಜನತಾ ಅದಾಲತ್‌ನಲ್ಲಿ ಒಂದಾದ ಜೋಡಿ
ಕೋರ್ಟ್‌ನಲ್ಲಿ ಶನಿವಾರ ನಡೆದ ಜನತಾ ಅದಾಲತ್‌ನಲ್ಲಿ ದಂಪತಿ ಪಾಲ್ಗೊಂಡು ಹಿರಿಯ ನ್ಯಾಯಾಧೀಶರ ಸಮ್ಮುಖದಲ್ಲಿ ಮನಸ್ಸು ಬದಲಾಯಿಸಿ ಮತ್ತೆ ಒಂದಾಗುವ ತೀರ್ಮಾನಕ್ಕೆ ಬಂದಿದ್ದಾರೆ. ಈ ಮೂಲಕ ಹೊಸ ಜೀವನಕ್ಕೆ ಮತ್ತೆ ಕಾಲಿಟ್ಟಿದ್ದಾರೆ. ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಎಂ ಅರುಟಗಿ ಬೇರೆಯಾಗಿದ್ದ ರವಿ ಮತ್ತು ಆರತಿ ಎಂಬ ದಂಪತಿಯನ್ನು ಕರೆಯಿಸಿ ನ್ಯಾಯಾಲಯದಲ್ಲಿ ತಿಳಿ ಹೇಳಿ, ಮತ್ತೆ ಒಂದು ಮಾಡಿದ್ದಾರೆ.