ಬೆಂಗಳೂರು ಉತ್ತರ: ಕೆಂಗೇರಿ–ಕೆಎಸ್‌ಆರ್ ಬೆಂಗಳೂರು ಮೆಟ್ರೋ ಸೇವೆ ಸ್ಥಗಿತ : ಪ್ರಯಾಣಿಕರ ಪರದಾಟ
ಕೆಂಗೇರಿಯಿಂದ ಕೆಎಸ್‌ಆರ್ ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ವಿಜಯನಗರ ನಿಲ್ದಾಣದಲ್ಲಿ ಇಳಿಸಲಾಯಿತು. ಬಳಿಕ 40 ನಿಮಿಷಕ್ಕೂ ಹೆಚ್ಚು ಕಾಲ ಮುಂದಿನ ರೈಲು ಸಿಗದೆ ಪ್ರಯಾಣಿಕರು ಕಾಯಬೇಕಾಯಿತು. ಸಿಬ್ಬಂದಿಯಿಂದ ಯಾವುದೇ ಸಹಾಯವಿಲ್ಲದೆ ಇದ್ದ ಘಟನೆಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.