ಕಡೂರು: ಸ್ವಾಮಿಕಟ್ಟೆಯಲ್ಲಿ ನಡೆದ ಜೋಡೆತ್ತಿನ ಸ್ಪರ್ಧೆಯಲ್ಲಿ ಎಂಎಲ್ಸಿ ಸಿ.ಟಿ ರವಿ ಭಾಗಿ.!
ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಧ್ಯೇಯ ವಾಕ್ಯದೊಂದಿಗೆ ಕಡೂರು ತಾಲ್ಲೂಕಿನ ಸ್ವಾಮಿಕಟ್ಟೆ ಗ್ರಾಮದಲ್ಲಿ ವಿರಾಟ್, ದಳಪತಿ ಹಾಗೂ ಭೇರ್ಯ ಸಂಘದ ಯುವಕರ ಬಳಗವು ಆಯೋಜಿಸಿದ್ದ, 2ನೇ ವರ್ಷದ ಜೋಡಿ ವ್ಯವಸಾಯದ ರಾಸುಗಳ ಸ್ಪರ್ಧೆಗೆ ಎಂಎಲ್ಸಿ ಸಿ.ಟಿ ರವಿ ಚಾಲನೆ ನೀಡಿದರು. ಶತಮಾನದ ಇತಿಹಾಸವುಳ್ಳ ಜೋಡೆತ್ತುಗಳ ಓಟದ ಜಾನಪದ ಕ್ರೀಡೆಯನ್ನು ಆಯೋಜಿಸಿರುವುದು ಅತ್ಯಂತ ಸಂತಸದ ಸಂಗತಿ. ಜನ ಮತ್ತು ಜಾನುವಾರುಗಳ ನಡುವಿನ ಕೌಟುಂಬಿಕ ಬಾಂಧವ್ಯಕ್ಕೆ ಈ ಕ್ರೀಡೆ ಸಾಕ್ಷಿಯಾಗಿದೆ ಎಂದು ಸಿ.ಟಿ ರವಿ ಅಭಿಪ್ರಾಯ ವ್ಯಕ್ತಪಡಿಸಿದರು.