ಕಾರವಾರ: ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಆಶ್ರಯದಲ್ಲಿ ಮಾಜಾಳಿ ಎಂಜಿನಿಯರಿಂಗ್ ಕಾಲೇಜಿ ನಲ್ಲಿ ಮಾದಕ ವಸ್ತು ನಿರ್ಮೂಲನೆ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮವನ್ನು ಕಾರವಾರದ ಆರ್ಟಿಓ ಜಾನ್ ಅವರು ಬುಧವಾರ ಮಧ್ಯಾಹ್ನ 1ಕ್ಕೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾ ಗಬಾರದು. ಒಮ್ಮೆ ನೀವು ಮಾದವ ವಸ್ತುಗಳಿಗೆ ಬಲಿಯಾದರೆ ಅದು ನಿಮ್ಮನ್ನು ಬಲಿ ಪಡೆದುಕೊಳ್ಳುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ಗಿರೀಶ್ ವಹಿಸಿದ್ದರು. ಡಾ. ಕೀರ್ತಿ ನಾಯ್ಕ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ಕಾಲೇಜಿನ ಪ್ರಾಚಾರ್ಯೆ ಶಾಂತಲಾ ಮಾತನಾಡಿದರು.