ಬಂಗಾರಪೇಟೆ: ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ:ಹುಲಿಬೆಲೆಯಲ್ಲಿ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್
ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದರು.ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾನುವಾರ ಮಾತನಾಡಿ,ಮುಂದಿನ ದಿನಗಳಲ್ಲಿಯೂ ಸಹಕಾರ ನೀಡಿ ತೆಗೆದುಕೊಂಡಿರುವ ಸಾಲವನ್ನು ಮರುಪಾವತಿಸಿ ಸಂಘವನ್ನು ಲಾಭದಾಯಕ ಕಡೆ ಕೊಂಡೊಯ್ಯಬೇಕು ಆಗ ಮಾತ್ರ ಸಂಘವಾಗಿ ಮುಂದುವರೆಸಲು ಸಾಧ್ಯ, ಈಗಾಗಲೇ ಸಂಘ ನಷ್ಟದಲ್ಲಿ ಇದೆ ಎಂದರು. ಹಾಗೂ ಸಹಕಾರಿ ಕಾನೂನು ಪ್ರಕಾರ ಒಂದು ಆಡಳಿತ ಅವಧಿಯ ಕನಿಷ್ಠ ಮೂರು ಮಹಾಸಭೆಗಳಿಗೆ ಸದಸ್ಯರು ಹಾಜರಾಗುವುದು ಕಡ್ಡಾಯ ಎಂದ್ರು