ಲಿಂಗಸೂರು: ಲಿಂಗಸುಗೂರು : ಆರ್ ಎಸ್ ಎಸ್, ಬಿಜೆಪಿ ಬಿಟ್ರೆ ಸರ್ಕಾರ ಬೇರೆ ಮಾತಾಡಲ್ಲ
ವತ್ತು ವಂಟ್ರು ಆರ್ ಎಸ್ ಎಸ್, ವತ್ತು ಮುಳುಗಿದ್ರು ಬಿಜೆಪಿ ಅನ್ನೋದು ಬಿಟ್ರೆ ಸರ್ಕಾರ ಬೇರೆ ಮಾತಾಡಲ್ಲ ಎಂದು ಲಿಂಗಸುಗೂರಿನಲ್ಲಿ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಎಂದರು. ರಾಜ್ಯದಲ್ಲಿ ಪ್ರವಾಹವಾಗಿದೆ, ರೈತರು ಬೆಳೆ ಕಳೆದುಕೊಂಡು ಜನ ಗುಳೆ ಹೋಗುತ್ತಿದ್ದಾರೆ ಅದರ ಬಗ್ಗೆ ಮಾತಾಡಲ್ಲ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಪಕ್ಕದ ಮಹಾರಾಷ್ಟ್ರ ಸರ್ಕಾರದ ಈಗಾಗಲೆ 30 ಸಾವಿರ ಕುಟುಂಬಗಳನ್ನ ಗುರುತಿಸಿ ಪರಿಹಾರ ಕೊಟ್ಟಿದೆ. ಆದ್ರೆ ನಮ್ಮ ರಾಜ್ಯ ಸರ್ಕಾರ ಬಿಜೆಪಿ ಆರ್ ಎಸ್ ಎಸ್ ಬಗ್ಗೆ ಮಾತನಾಡುವುದು ಬಿಟ್ಟರೆ ಬೇರೆ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.