ಹನೂರು: ವಡೆಕಹಳ್ಳ ಗ್ರಾಮದಲ್ಲಿ ರೈತರ ಧರಣಿಯ ಬೆನ್ನೆಲೆ: ಪಾಲಿಮೇಡು ಕೆರೆಗೆ ನೀರು
ಹನೂರು: ತಾಲ್ಲೂಕಿನ ವೆಡೆಕಹಳ್ಳ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ರೈತರು ಧರಣಿ ಹಮ್ಮಿಕೊಂಡಿರುವ ಬೆನ್ನೆಲೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಮಾರ್ಟಳ್ಳಿ ಸಮೀಪದ ಪಾಲಿಮೇಡು ಕೆರೆಗೆ ನೀರು ಹರಿಸಲು ಮುಂದಾಗಿದ್ದಾರೆ. ಈ ವೇಳೆ ರೈತರು ಮಾತನಾಡಿ, “ಪಾಲಿಮೇಡು ಕೆರೆಗೆ ನೀರು ಹರಿಸುವುದು ನಿರಂತರವಾಗಿರಬೇಕು. ಪ್ರತಿ ಬಾರಿ ಜನರ ಒತ್ತಡ ಬಂದಾಗ ಮಾತ್ರ ನೀರು ಬಿಡುವ ಬದಲು, ನಿರಂತರ ನೀರಿನ ಸರಬರಾಜು ಆಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಯಡಿ ನೀರು ಬಿಡುಗಡೆ ಮಾಡಿದರೆ, ನಮ್ಮ ಪ್ರದೇಶದ ಬೆಳೆಗಳು ಉಳಿಯುತ್ತವೆ ಮತ್ತು ರೈತರ ಜೀವನದಲ್ಲಿ ಸ್ವಲ್ಪ ನೆಮ್ಮದಿ ಉಂಟಾಗುತ್ತದೆ ಎಂದು ಬೇಡಿಕೆ ವ್ಯಕ್ತಪಡಿಸಿದರು.