
ಧಾರವಾಡ ನಗರಕ್ಕೆ ಜುಲೈ 24 ಶುಕ್ರವಾರದಂದು ವಿಶ್ವವಿಖ್ಯಾತ ಕಾಶಿಯ ವಿಹಂಗಮ ಯೋಗ ಆಶ್ರಮದ ಮಹಾನ್ ಸಂತರಾದ ಶ್ರೀ ವಿಜ್ಞಾನ ದೇವ ಜೀ ಮಹಾರಾಜರ ಆಗಮನ
ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಭಾರತದ ಪವಿತ್ರ ಆಧ್ಯಾತ್ಮಿಕ ನಗರವಾದ ಕಾಶಿ (ವಾರಾಣಸಿ)ಯಲ್ಲಿ ವಿಶ್ವವಿಖ್ಯಾತ ವಿಹಂಗಮ ಯೋಗ ಸಂಸ್ಥಾನವು ವಿಶ್ವ ದಲ್ಲೇ ಮೊಟ್ಟ ಮೊದಲ ಬಾರಿಗೆ 25,000 ಕುಂಡಗಳ ವಿಶ್ವ ದಾಖಲೆಯ ವಿಶ್ವಶಾಂತಿ ಮಹಾಯಜ್ಞವನ್ನು ಆಯೋಜಿಸಲಾಗುತ್ತಿದೆ. ಈ ದಿವ್ಯ ಕಾರ್ಯಕ್ರಮದಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಲಕ್ಷಾಂತರ ಭಕ್ತರು ಮತ್ತು ಸಾಧಕರು ಭಾಗವಹಿಸುತ್ತಾರೆ. ಈ ಮಹಾಯಜ್ಞಕ್ಕೆ ಭಕ್ತರನ್ನು ಆಹ್ವಾನಿಸಲು ಪರಮಪೂಜ್ಯ ಸಂತ ಪ್ರವರ ಶ್ರೀ ವಿಜ್ಞಾನದೇವ ಜೀ ಮಹಾರಾಜರು ಸ್ವರ ವೇದ ಸಂದೇಶ ಯಾತ್ರೆ ( ಸ್ವಯಂ ಜಾಗೃತಿಯಿಂದ ರಾಷ್ಟ್ರ ಜಾಗೃತಿ ) ಯ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಪ್ರವಾಸ ಮಾಡುತ್ತಿದ್ದಾರೆ.
ಈ ಪುಣ್ಯ ಪವಿತ್ರ ಯಾತ್ರೆಯ ಅಂಗವಾಗಿ 24 ಜುಲೈ 2026 ರಂದು ಶುಕ್ರವಾರ ಸಂಜೆ 6 ಗಂಟೆಗೆ ಇದೇ ಮೊಟ್ಟ ಮೊದಲ ಬಾರಿಗೆ ಧಾರವಾಡದ ಪವಿತ್ರ ಭೂಮಿಗೆ ಆಗಮಿಸುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಸ್ಥಳ : ಶ್ರೀ ಚನ್ನಬಸವ ತಾಯವ್ವನವರ ಕಲ್ಯಾಣ ಮಂಟಪ, ತಾಯವ್ವನವರ ಲೇಔಟ್, ಹೆಬ್ಬಳ್ಳಿ ರಸ್ತೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ, ಧಾರವಾಡ. ಈ ಸಂದರ್ಭದಲ್ಲಿ ಸುಮಾರು ಮೂರು ಗಂಟೆಗಳ ದಿವ್ಯ ಆಧ್ಯಾತ್ಮಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇದರಲ್ಲಿ ಪರಮಪೂಜ್ಯ ಸಂತ ಪ್ರವರ ಶ್ರೀ ವಿಜ್ಞಾನದೇವ ಜೀ ಮಹಾರಾಜರ ಅಮೃತಮಯ ಅಧ್ಯಾತ್ಮಿಕ ಸಂದೇಶ, 5 ಕುಂಡಗಳ ವಿಶ್ವಶಾಂತಿ ವೈದಿಕ ಹವನ, ಬ್ರಹ್ಮವಿದ್ಯಾ ವಿಹಂಗಮ ಯೋಗದ ಧ್ಯಾನ ಮತ್ತು ಸಾಧನೆಯ ಅಭ್ಯಾಸದ ಮಾರ್ಗದರ್ಶನ ಕಾರ್ಯಕ್ರಮವಿರುತ್ತದೆ.
ಇದು ಸಾಮಾನ್ಯ ಸಾಧನೆಯಲ್ಲ, ಸ್ವತಃ ಭಗವಾನ ಶ್ರೀಕೃಷ್ಣರು ಕುರುಕ್ಷೇತ್ರದ ಧರ್ಮಯುದ್ಧದಲ್ಲಿ ಅರ್ಜುನನಿಗೆ ಉಪದೇಶಿಸಿದ ಸನಾತನ ಯೋಗವಿದ್ಯೆಯಾಗಿದೆ. ಈ ದಿವ್ಯ ಸಾಧನೆಯ ಮೂಲಕವೇ ನಮ್ಮ ಋಷಿ-ಮುನಿಗಳು ಮನಸ್ಸನ್ನು ವಿಷಯ-ವಿಕಾರಗಳಿಂದ ಮುಕ್ತಗೊಳಿಸಿ, ಆತ್ಮ ಸಾಕ್ಷಾತ್ಕಾರ ಮತ್ತು ಪರಮಾತ್ಮನ ಅನುಭವವನ್ನು ಪಡೆದರು.
ಧಾರವಾಡದಲ್ಲಿ ನಡೆಯಲಿರುವ ಈ ಐತಿಹಾಸಿಕ ಹಾಗೂ ದಿವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಪುಣ್ಯಕಾರ್ಯಕ್ಕೆ ತಮ್ಮ ಅಮೂಲ್ಯ ಸಹಕಾರವನ್ನು ನೀಡುವಂತೆ ಹಾಗೂ ಕಾರ್ಯಕ್ರಮದ ನಂತರ ಮಹಾ ಪ್ರಸಾದವನ್ನು ಸ್ವೀಕರಿಸಬೇಕೆಂದು ಪತಂಜಲಿ ಯೋಗ ಪೀಠ, ಕರ್ನಾಟಕದ ರಾಜ್ಯ ಪ್ರಭಾರಿ, ಆಯೋಜನಾ ಸಮಿತಿ ಮಾರ್ಗದರ್ಶಕರು ಶ್ರೀ ಭವರಲಾಲ ಆರ್ಯ ಅವರು ಹುಬ್ಬಳ್ಳಿ - ಧಾರವಾಡದ ಸರ್ವ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಸಂಧರ್ಭದಲ್ಲಿ ವಿಹಂಗಮ ಯೋಗ ಸಂಸ್ಥೆಯ ಪ್ರಚಾರಕರಾದ ನಿತಿನ್ ಅಗರ್ವಾಲ್, ಮುಕ್ತಿ ರಂಜನ್, ಶ್ರೀ ಬಾಬಾ ರಾಮ್ ದೇವ್ ಸೇವಾ ಸಂಸ್ಥೆ, ಧಾರವಾಡ ಅಧ್ಯಕ್ಷರಾದ ಸ್ವರೂಪ ರಾಮ್ ಚೌಧರಿ, ಈ ಕಾರ್ಯಕ್ರಮ ಆಯೋಜನಾ ಸಮಿತಿ ಸದಸ್ಯರಾದ ಮೋಹನ ಲಾಲ್ ಸಿರ್ವಿ, ದುದಾ ರಾಮ ಚೌಧರಿ, ಮಾಲಾ ರಾಮ್ ದೇವಾಸಿ, ಪತಂಜಲಿ ಪರಿವಾರ, ಧಾರವಾಡದ ರಮೇಶ್ ಸುಲಾಕೆ, ಉಮಾ ಅಗಡಿ, ಲೀಲಾವತಿ ಸಾಂಬ್ರಾಣಿ, ನಾಗರತ್ನ ಸುಲಾಖೆ, ಬಸವರಾಜ ಮಮ್ಮಿಗಟ್ಟಿ, ಉಮೇಶ್ ಕುಲಕರ್ಣಿ, ಸವಿತಾ, ಬಸವರಾಜ ಹಿರೇಮಠ, ಲಲಿತಾ, ಗಾಯತ್ರಿ, ಗೀತಾ, ಶಂಭುಲಿಂಗಪ್ಪ, ವೀರೇಶ್ ಮುಂತಾದವರು ಉಪಸ್ಥಿತರಿದ್ದರು.
ಧನ್ಯವಾದಗಳು 🙏🇮🇳🙏