ಹುಬ್ಬಳ್ಳಿ: ನಗರದ ಅಮರಗೋಳದ ಎಪಿಎಂಪಿ (ಕೃಷಿ ಮಾರುಕಟ್ಟೆ ಕಾರ್ಯಾಲಯ) ಹಾಗೂ ಸಂಪೂರ್ಣ ಖರೀದಿ ವೈವಾಟು ಬಂದ್ ಮಾಡಿ ಉಳ್ಳಾಗಡ್ಡಿ ಬೆಳೆಗೆ ಶೀಘ್ರ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಶೀಘ್ರ ಹೆಸರು ಖರೀದಿ ಪ್ರಕ್ರಿಯೆ ಆರಂಭಿಸಬೇಕೆಂದು ಒತ್ತಾಯಿಸಿ ಧಾರವಾಡ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರ ನೇತೃತ್ವದಲ್ಲಿ ಸಾವಿರಾರು ರೈತರು ಚಕ್ಕಡಿ, ಟ್ರ್ಯಾಕ್ಟರ್ ಮೂಲಕ ಎಪಿಎಂಸಿಯಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು. ರಾಜು ಕರಮಡಿ ಸೇರಿದಂತೆ ನೂರಾರು ರೈತರು ಇದ್ದರು.