ಆನೇಕಲ್: ನಟ ದರ್ಶನ್ ಬೆನ್ನು ನೋವಿಗೆ ಫಿಸಿಯೋಥೆರಪಿ ಚಿಕಿತ್ಸೆಗೆ ಮನವಿ
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿರೊ ನಟ ದರ್ಶನ್‌ಗೆ ಈ ಬಾರಿ ಬೆಳಕಿಲ್ಲದ ದೀಪಾವಳಿಯಾಗಿದೆ. ಇತ್ತ ಬೆನ್ನು ನೋವು ಹಿನ್ನೆಲೆ ಫಿಸಿಯೋಥೆರಪಿ ನೀಡಲು ಜೈಲಿನ ವೈದ್ಯರು ಪತ್ರ ಬರೆದಿದ್ದಾರೆ. ಇನ್ನೂ ಜೈಲಿನಲ್ಲಿ ದರ್ಶನ್‌ಗೆ ಈಗಾಗ್ಲೇ ಬೆನ್ನು ನೋವಿಗೆ ಹೀಟಿಂಗ್ ಬೆಲ್ಟ್ ಹಾಗೂ ಚೇರ್ ನೀಡಲಾಗಿದೆ. ಈ ನಡುವೆ ಕೇಂದ್ರ ಕಾರಾಗೃಹ ಆಸ್ಪತ್ರೆ ಮುಖ್ಯ ವೈದ್ಯರು, ಸಿ.ವಿ ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ. ಚಿಕಿತ್ಸೆ ಅಗತ್ಯ ಇರುವವರೆಗೂ ಕಾರಾಗೃಹಕ್ಕೆ ವೈದ್ಯರ ತಂಡ ನಿಯೋಜಿಸಲು ಹಾಗೂ ಹೀಟಿಂಗ್ ಬೆಲ್ಟ್ ನೀಡಲು ಮನವಿ ಮಾಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರದ ವರದಿಯಲ್ಲಿ ಬೆನ್ನು ನೋವಿನ ಬಗ್ಗೆಯೂ ಉಲ್ಲೇಖವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.