ಮಿರ್ಕಲ್ ರೈತರಿಗೆ 8 ದಿನಗಳಿಂದ ತ್ರಿಫೇಜ್ ವಿದ್ಯುತ್ ಬಾಧೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ ಹುಲಸೂರ: ತಾಲ್ಲೂಕಿನ ಮಿರ್ಕಲ್ ಗ್ರಾಮದ ರೈತರು ಕಳೆದ ಎಂಟು ದಿನಗಳಿಂದ ತ್ರಿಫೇಸ್ ವಿದ್ಯುತ್ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಪ್ರತಿದಿನ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಸ್ಪಷ್ಟ ಸೂಚನೆ ಇದ್ದರೂ, ಸ್ಥಳೀಯ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯತೆಯಿಂದ ಸಮಯಕ್ಕೆ ಸರಿಯಾಗಿ ವಿದ್ಯುತ್ ಸಿಗದೆ ರೈತರ ಕೃಷಿ ಚಟುವಟಿಕೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ಕೊರತೆಯಿಂದಾಗಿ ಗೋಧಿ, ಜೋಳ, ಕಡ್ಡಿ, ಚೀಯಾ ಹಾಗೂ ವಿವಿಧ ತರಕಾರಿ ಬೆಳೆಗಳಿಗೆ ಅಗತ್ಯವಾದ ನೀರು ದೊರಕದೆ ಬೆಳೆಗಳು ಒಣಗುವ ಸ್ಥಿತಿ ಎದುರಾಗಿದೆ. ಇತ್ತೀಚೆಗೆ ಅತಿ