ಬೀದರ್: ನಗರದಲ್ಲಿ ನಡೆದ ಮರಾಠ ಮೇಳದಲ್ಲಿ ಕಳೆದು ಹೋದ ಮೊಬೈಲ್ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ನಗರ ನೂತನ ಪೊಲೀಸ್ ಠಾಣೆ ಪೋಲಿಸರು
Bidar, Bidar | Dec 1, 2025 ನಗರದಲ್ಲಿ ಭಾನುವಾರ ನಡೆದ ಮರಟ ಮೇಳದಲ್ಲಿ ವ್ಯಕ್ತಿಯೊಬ್ಬರು ಮೊಬೈಲ್ ಕಳೆದುಕೊಂಡ ಕುರಿತು ನಗರ ನೂತನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕಾರ್ಯ ಪ್ರವರ್ತದ ಪೊಲೀಸರು ಕಳೆದು ಹೋದ ಮೊಬೈಲ್ ಅನ್ನು ಪತ್ತೆಹಚ್ಚಿದ್ದಾರೆ. ನಗರ ನೂತನ ಪೊಲೀಸ್ ಠಾಣೆ ಪಿಎಸ್ಐ ವಿಜಯಕುಮಾರ ಮೊಬೈಲ್ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಮಾಹಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ಸೋಮವಾರ ಸಂಜೆ 4ಕ್ಕೆ ತಿಳಿಸಲಾಗಿದೆ.